The Must read Kannada Shubanudigalu are listed below.
1.
ಸ್ಪಂದನೆಗಳೇ ಇಲ್ಲದ ಜಾಗದಲ್ಲಿ ಭಾವನೆಗಳ ಸಂತೆ ನಡೆಸಿದರೆ..
ಬಂಡೆಗಳ ಮೇಲೆ ನೀರು ಸುಲಿದಂತೆ.!!
2.
ಮನುಷ್ಯ ಎಷ್ಟೇ ಮೇಧಾವಿಯಾಗಿದ್ದರೂ…
ಕೆಲವೊಮ್ಮೆ ಪರಿಸ್ಥಿತಿಯ ಕೈಗೊಂಬೆ ಆಗಲೇಬೆಕಾಗುತ್ತದೆ.!!
3.

ಅರ್ಥ ಮಾಡಿಕೊಳ್ಳುವ ಮನಸ್ಸು,
ಕೈ ಜೋಡಿಸುವ ಸ್ನೇಹ,ನಮ್ಮ ಜೀವನದ ನಿಜವಾದ ಆಸ್ತಿಗಳು..!!
4.
ನೋವು ಕಲಿಸುವ ಪಾಠವನ್ನು
ನಗು ಎಂದಿಗೂ ಕಳಿಸಲಾರದು.!
5.
ಜೀವನದ ಅಂತ್ಯದವರೆಗೂ
ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ,ಬದುಕು ಕಲಿಸುವ ಪಾಠ ..!!
6.
ಸೋಲಿನ ಪಾಠ ಚಂದ ,
ಹಸಿವಿನ ಊಟ ಚಂದ ,
ಪ್ರೀತಿಯ ಕೋಪ ಚಂದ . . . .ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ,
ನಮ್ಮ ಬದುಕೇ ಆನಂದ..!!
7.
ಜೀವನಕ್ಕೊಂದು ಅರ್ಥ ಸಿಗಬೇಕೆಂದರೆ,
ಇಷ್ಟ ಬಂದಂತೆ ಬದುಕಬೇಕು,ಕಷ್ಟ ಬಂದರು ಎದುರಿಸಬೇಕು…!!
8.
“ಜೀವ” ಚಿಕ್ಕದು “ಜೀವನ” ದೊಡ್ಡದು,
ಸಾಯುವವನಿಗೆ ಒಂದೇ ದಾರಿ,ಸಾಧಿಸುವವನಿಗೆ ಸಾವಿರ ದಾರಿ..!!


